ಏಪ್ರಿಲ್ 2021 ರ ಮಧ್ಯದಲ್ಲಿ, ಭಾರತದಲ್ಲಿ ಕೋವಿಡ್-19 ಪ್ರಕರಣಗಳು ವೇಗವಾಗಿ ಏರುತ್ತಿವೆ, ಇದು ಎಲ್ಲರಿಗೂ ಆತಂಕಕಾರಿ ಪರಿಸ್ಥಿತಿಯಾಗಿದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸುವ ಏಕೈಕ ಮಾರ್ಗವೆಂದರೆ ದೇಶದ ಪ್ರತಿಯೊಬ್ಬ ನಾಗರಿಕನು ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು.
ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ಕಳೆದ ವರ್ಷ ಕೋವಿಡ್-19 ರ ಮೊದಲ ವೇವ್ನಲ್ಲಿ ತೆಗೆದುಕೊಂಡ ಪ್ರತಿಯೊಂದು ತಡೆಗಟ್ಟುವ ಕ್ರಮಗಳು ಇಂದಿಗೂ ಮುಖ್ಯವಾಗಿದೆ.
ಮಾಸ್ಕ ಧರಿಸಿ
ಮಾಸ್ಕಗಳು ನಿಮ್ಮನ್ನು ಸೋಂಕಿನಿಂದ ರಕ್ಷಿಸುತ್ತವೆ ಮತ್ತು ನಿಮ್ಮಿಂದ ಇತರರಿಗೆ ಸೋಂಕಿನ ಹರಡುವಿಕೆಯನ್ನು ಸಹ ತಡೆಗಟ್ಟುತ್ತವೆ.
ನೀವು ಲಸಿಕೆಯನ್ನು ಹಾಕಿಸಿಕೊಂಡಿದ್ದರೂ ಮಾಸ್ಕ ಧರಿಸಿ
ಸಾಮಾಜಿಕ ಅಂತರ
ಹೊರಗಿರುವಾಗ ಕನಿಷ್ಠ 6 ಅಡಿ ಅಂತರದಲ್ಲಿ ನಿಂತುಕೊಳ್ಳಿ, ಇದು ವೈರಸ್ ಹರಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ
ನೀವು ಎಷ್ಟು ದೂರದಲ್ಲಿ ನಿಲ್ಲುತ್ತೀರೋ, ತಡೆಗಟ್ಟುವುದು ಉತ್ತಮವಾಗುತ್ತದೆ
ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ
ದಿನದಲ್ಲಿ ಅನೇಕ ಬಾರಿ ನಿಮ್ಮ ಕೈಗಳನ್ನು ತೊಳೆಯಿರಿ ಮತ್ತು ನಿಮ್ಮ ಮುಖವನ್ನು ಸಾಧ್ಯವಾದಷ್ಟು ಸ್ಪರ್ಶಿಸಬೇಡಿ
ಹೆಚ್ಚು ಬಳಸಿದ ಮೇಲ್ಮೈಗಳನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಸ್ವಚ್ ಗೊಳಿಸಿ
ಮನೆಯಲ್ಲಿಯೇ ಇರಿ
ಸಾಧ್ಯವಾದಷ್ಟು, ಮನೆಯಲ್ಲಿಯೇ ಇರಲು ಪ್ರಯತ್ನಿಸಿ . ನಿಮ್ಮ ಕಚೇರಿ ಅನುಮತಿಸಿದರೆ ಮನೆಯಿಂದ ಕೆಲಸ ಮಾಡಿ
ಮನೆಯೊಳಗೆ ಇರುವುದು ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ
ನೀವು ಮತ್ತು ನಿಮ್ಮ ಕುಟುಂಬದವರು ಲಸಿಕೆ ಪಡೆಯಿರಿ
ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ಲಸಿಕೆ ಪಡೆಯುವುದು. ಈಗ, ಭಾರತ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಲಸಿಕೆಗಳನ್ನು ನೀಡುತ್ತಿದೆ. ನೀವು ಅಥವಾ ನಿಮ್ಮ ಕುಟುಂಬ ಸದಸ್ಯರು ಅರ್ಹರಾಗಿದ್ದರೆ, ದಯವಿಟ್ಟು ಲಸಿಕೆ ಪಡೆಯಿರಿ.
ನೀವು ಸೋಂಕಿಗೆ ಒಳಗಾಗಿದ್ದರೂ ಸಹ, ರೋಗಲಕ್ಷಣಗಳು ತೀವ್ರವಾಗಿರುವುದಿಲ್ಲ.
ವೈರಸ್ ಹರಡುವುದನ್ನು ತಡೆಯುತ್ತದೆ
ವ್ಯಾಕ್ಸಿನೇಷನ್ ಒಬ್ಬ ವ್ಯಕ್ತಿಯಿಂದ ಇತರರಿಗೆ ಹರಡುವುದನ್ನು ಕಡಿಮೆ ಮಾಡುತ್ತದೆ.
ಹರ್ಡ್ ಇಮ್ಯುನಿಟಿ ಒದಗಿಸುತ್ತದೆ
ಹೆಚ್ಚಿನ ಜನರು ಲಸಿಕೆ ಹಾಕಿಸಿಕೊಂಡಾಗ, ಅದು ಎಲ್ಲರಿಗೂ ಪರೋಕ್ಷ ರಕ್ಷಣೆ ನೀಡುತ್ತದೆ
ಭಾರತದಲ್ಲಿ ನೀಡಲಾಗುವ ಎರಡು ಲಸಿಕೆಗಳ ಸುರಕ್ಷತಾ ಗುಣಮಟ್ಟವನ್ನು ವೈದ್ಯಕೀಯ ಅಧಿಕಾರಿಗಳು ಸಾಬೀತುಪಡಿಸಿದ್ದಾರೆ. ಲಸಿಕೆ ಪಡೆಯುವುದರಿಂದ ಜೀವ ಉಳಿಸಲು ಮತ್ತು ಕೋವಿಡ್-19 ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಅತ್ಯಂತ ಸಾಮಾನ್ಯ ಲಕ್ಷಣಗಳು ಕೋವಿಡ್-19
ಕೋವಿಡ್ -19 ರ ಲಕ್ಷಣಗಳು ಜ್ವರ ಅಥವಾ ನೆಗಡಿಯಂತಹ ಉಸಿರಾಟದ ಕಾಯಿಲೆಗಳ ಲಕ್ಷಣಗಳಿಗೆ ಹೋಲುತ್ತವೆ.
ಗಂಟಲು ಕೆರತ
ಉಸಿರಾಟದ ತೊಂದರೆ
ಜ್ವರ
ಮೈಕೈ ನೋವು
ವಾಸನೆ ಮತ್ತು ರುಚಿಯ ನಷ್ಟ
ಭೇದಿ
ಈ ರೋಗಲಕ್ಷಣಗಳು ಇತರ ವೈರಲ್ ಸೋಂಕುಗಳಿಗೆ ಹೋಲುತ್ತವೆ, ಆದ್ದರಿಂದ ಆರಂಭದಲ್ಲಿ ಅವುಗಳ ಮತ್ತು ಕೋವಿಡ್ -19 ರ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಅಸಾಧ್ಯ.
ನೀವು ಈ ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೆ ...
ಹಂತ 1
ಡಾಕ್ಟರ ಸಲಹೆ ಪಡೆಯಿರಿ
ವೈಯಕ್ತಿಕ ಅಥವಾ ಟೆಲಿ-ಕೌನ್ಸೆಲಿಂಗ್ ಮೂಲಕ ಡಾಕ್ಟರ ಮೂಲಕ ತಪಾಸಣೆ ಮಾಡಿಸಿಕೊಳ್ಳಿ .
ಹಂತ 2
ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ
ಆಸ್ಪತ್ರೆಯ ದಾಖಲಾಗುವ ಸಂದರ್ಭದಲ್ಲಿಯೂ ಇದು ಮುಖ್ಯವಾಗಿದೆ ಏಕೆಂದರೆ ಪ್ರತಿ ಆಸ್ಪತ್ರೆಯು ಕೋವಿಡ್ ಟೆಸ್ಟ್ ಫಲಿತಾಂಶಗಳನ್ನು ಕೇಳುತ್ತವೆ.
ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ: ದಯವಿಟ್ಟು ಪ್ರತ್ಯೇಕವಾಗಿರಿ!
ಎಲ್ಲರಿಂದ ನಿಮ್ಮನ್ನು ಪ್ರತ್ಯೇಕಿಸುವುದು ಮೊದಲ ಪ್ರಮುಖ ವಿಷಯ.
ಪ್ರತ್ಯೇಕ ಕೋಣೆಯಲ್ಲಿ ನಿಮ್ಮ ಕುಟುಂಬದಿಂದ ದೂರವಿರಿ
ಸಾಮಾನ್ಯ ಸ್ಥಳಗಳನ್ನು ಬಳಸುವಾಗ ಮಾಸ್ಕ ಧರಿಸಿ
ಸಾಧ್ಯವಾದರೆ, ಪ್ರತ್ಯೇಕ ವಾಶ್ರೂಮ್ಗಳನ್ನು ಬಳಸಿ
ನಿಮ್ಮ ಪಾತ್ರೆಗಳು, ಬಾಗಿಲು ಹಿಡಿಕೆಗಳು ಮತ್ತು ನಿಮ್ಮ ಕೋಣೆಯನ್ನು ಸ್ವಚ್ಛಗೊಳಿಸಿ
ನಿಮ್ಮ ಕುಟುಂಬ ದೂರ ಹೋದ ನಂತರ ಮಾತ್ರ ಹೊರಗೆ ಇಟ್ಟ ವಸ್ತುಗಳನ್ನು ತೆಗೆದುಕೊಳ್ಳಿ
ನಿಮ್ಮ ವೈದ್ಯರು ಶಿಫಾರಸು ಮಾಡಿದ ಔಷಧಿಯನ್ನು ತೆಗೆದುಕೊಳ್ಳಿ.
ನಿಮ್ಮ ಬಾಗಿಲು ಮುಚ್ಚಿ ಆದರೆ ಉತ್ತಮ ಗಾಳಿ ಬರುವಂತೆ ಕಿಟಕಿಗಳನ್ನು ತೆರೆಯಿರಿ
ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಾಮೀಟರ್ ಮೂಲಕ ನಿಮ್ಮನ್ನು ಮೇಲ್ವಿಚಾರಣೆ ಮಾಡಿಕೊಳ್ಳಿ.
ಪಲ್ಸ್ ಆಕ್ಸಿಮೀಟರ್ ಎಂದರೇನು? ನೀವು ಇದನ್ನು ಹೇಗೆ ಬಳಸುತ್ತೀರಿ?
ಪಲ್ಸ್ ಆಕ್ಸಿಮೀಟರ್ ನಿಮ್ಮ ಉಗುರುಗಳ ಬಣ್ಣದಿಂದ ನಿಮ್ಮ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು (ಅಥವಾ ಸ್ಯಾಚುರೇಶನ್) ನಿರ್ಧರಿಸುತ್ತದೆ. ಆದ್ದರಿಂದ, ಇದು ನಿಮ್ಮ ಬೆರಳುಗಳನ್ನು ತಲುಪುವ ರಕ್ತವನ್ನು ಅವಲಂಬಿಸಿರುತ್ತದೆ.
ಅನೇಕ ಬೆರಳುಗಳು ಮತ್ತು ಎರಡೂ ಕೈಗಳಲ್ಲಿ ಆಮ್ಲಜನಕದ ಶುದ್ಧತ್ವವನ್ನು ಪರಿಶೀಲಿಸಿ
ಆಕ್ಸಿಮೀಟರ್ ಒಳಗೆ ಬೆರಳನ್ನು ಕೆಲವು ನಿಮಿಷಗಳ ಕಾಲ ಇರಿಸಿ ಮತ್ತು ಅದು ಸ್ಥಿರವಾದ ನಂತರವೆ ರೀಡಿಂಗ್ ತೆಗೆದುಕೊಳ್ಳಿ
ನಿಮ್ಮ ಸ್ಯಾಚುರೇಶನ್ ಮಟ್ಟವನ್ನು ದಿನಕ್ಕೆ ಮೂರು ಬಾರಿ ಮೇಲ್ವಿಚಾರಣೆ ಮಾಡಿಕೊಳ್ಳಿ
ಸಾಮಾನ್ಯ ಮಟ್ಟವು 98% ಕ್ಕಿಂತ ಹೆಚ್ಚಿದೆ. ಧೂಮಪಾನಿಗಳು ಮತ್ತು ಶ್ವಾಸಕೋಶದ ರೋಗಿಗಳು ಸುಮಾರು 95% ನಷ್ಟು ರೀಡಿಂಗ್ ಹೊಂದಿರಬಹುದು.
ನೀವು ಆಸ್ಪತ್ರೆಗೆ ಹೋಗಬೇಕು ಒಂದು ವೇಳೆ…
ನಿಮಗೆ ಯಾವುದೇ ರೋಗಲಕ್ಷಣಗಳು ಕಾಣಿಸಿದರೆ
ನಿಮ್ಮ ಆಮ್ಲಜನಕದ ಮಟ್ಟವು 93% ಅಥವಾ ಅದಕ್ಕಿಂತ ಕಡಿಮೆ ಆದರೆ
ಈ ಮಟ್ಟವು ರೋಗವು ಮಧ್ಯಮ ಮಟ್ಟಕ್ಕೆ ಮುಂದುವರಿಯುತ್ತಿದೆ ಎಂದು ಸೂಚಿಸುತ್ತದೆ, ಡಾಕ್ಟರರಿಂದ ಹೆಚ್ಚಿನ ತಪಾಸಣೆ ಅಗತ್ಯವಿರುತ್ತದೆ
ನಿಮಗೆ ಉಸಿರಾಟ ಅಥವಾ ಎದೆ ನೋವು ಇದ್ದರೆ
ಈ ಲಕ್ಷಣಗಳು ಗಂಭೀರ ಸ್ಥಿತಿಯನ್ನು ಸೂಚಿಸುತ್ತವೆ. ದಯವಿಟ್ಟು ತಕ್ಷಣ ಆಸ್ಪತ್ರೆಗೆ ಹೋಗಿ ದಯವಿಟ್ಟು ತಕ್ಷಣ ಆಸ್ಪತ್ರೆಗೆ ಹೋಗಿ
ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು
ನಮ್ಮ ಕ್ಲಿನಿಕ್ನಲ್ಲಿ ನಾನು ಲಸಿಕೆ ಪಡೆಯಬಹುದೇ?
ಹೌದು ನಮ್ಮಾ ಕ್ಲಿನಿಕ್ನಲ್ಲಿ ವ್ಯಾಕ್ಸಿನೇಷನ್ ಕ್ಯಾಂಪ್ ನಡೆಯಲಿದೆ. ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬರಲಿವೆ.
ರಿಮೆಡೆಸಿವಿರ್ ಒಂದು ಲಸಿಕೆ ಇದೆಯೇ?
ಇಲ್ಲ ರಿಮೆಡೆಸಿವಿರ್ ಒಂದು ಆಂಟಿವೈರಲ್ ಔಷಧವಾಗಿದೆ. ಕೋವಿಡ್-19 ಸೋಂಕಿನ ವಿರುದ್ಧ, ಇದು ಸಾವಿನ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಯಾವುದೇ ಪರಿಣಾಮವನ್ನು ತೋರಿಸಿಲ್ಲ, ಕೆಲವು ಅಧ್ಯಯನಗಳು ಹೊರತುಪಡಿಸಿ ಇದು ರೋಗದ ಅವಧಿಯನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತದೆ.
ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ರೆಮೆಡಿಸ್ವಿರ್ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುವುದಿಲ್ಲ, ಅವರು ಎಷ್ಟು ತೀವ್ರವಾಗಿ ಬಳಲುತ್ತಿದ್ದರೂ, ಇದು ಬದುಕುಳಿಯುವಿಕೆಯನ್ನು ಮತ್ತು ಇತರ ಫಲಿತಾಂಶಗಳನ್ನು ಸುಧಾರಿಸುತ್ತದೆ ಎಂಬುದಕ್ಕೆ ಪ್ರಸ್ತುತ ಯಾವುದೇ ಪುರಾವೆಗಳಿಲ್ಲ.
ಇತ್ತೀಚೆಗೆ ಭಾರತದಲ್ಲಿ, ನವದೆಹಲಿಯ ಏಮ್ಸ್, ಕೋವಿಡ್-19 ಚಿಕಿತ್ಸೆಗೆ ಶಿಫಾರಸು ಮಾಡಿದ ಔಷಧಿಗಳಿಗಾಗಿ ತಮ್ಮ ಹೊಸ ಚಿಕಿತ್ಸಾ ಪ್ರೋಟೋಕಾಲ್ನಿಂದ ರೆಮ್ಡೆಸಿವಿರ್ ಅನ್ನು ತೆಗೆದುಹಾಕಿದೆ.
ಕ್ಲಿನಿಕ್ ಹೋಮ್ ಮಾನಿಟರಿಂಗ್ ವರದಿ ಎಂದರೇನು?
ಕ್ಲಿನಿಕ್ ತನ್ನ ಎಲ್ಲಾ ಚಂದಾದಾರರಿಗೆ ಉಚಿತ ಮನೆಯ ಆರೈಕೆ ಮತ್ತು ವೈದ್ಯಕೀಯ ಸಹಾಯವನ್ನು ನೀಡುತ್ತದೆ. ಹೆಚ್ಚು ತಿಳಿಯಲು 7813811811 ಗೆ ಕರೆ ಮಾಡಿ
ನಾನು ಕ್ಲಿನಿಕ್ ಡಾಕ್ಟರ ಜೊತೆ ಫೋನ್ನಲ್ಲಿ ಮಾತನಾಡಬಹುದೇ?
ಹೌದು! ಕ್ಲಿನಿಕ್ ದೂರಸಂಪರ್ಕ ಯೋಜನೆಯನ್ನು ನೀಡುತ್ತದೆ, ಅಲ್ಲಿ ನೀವು ಅನಿಯಮಿತ ಫೋನ್ ಸಮಾಲೋಚನೆಗಳು, ಔಷಧಿಗಳ ಮೇಲಿನ ರಿಯಾಯಿತಿಗಳು ಮತ್ತು ಆರೋಗ್ಯ ವಿಮೆಯನ್ನು ಪಡೆಯುತ್ತೀರಿ.
ನಾನು ಕ್ಲಿನಿಕ್ನಲ್ಲಿ ಆರ್ಟಿ-ಪಿಸಿಆರ್ ಟೆಸ್ಟ್ ಪಡೆಯಬಹುದೇ?
ಹೌದು! ಹೌದು! ವಾಸ್ತವವಾಗಿ, ನೀವು ಬೆಂಗಳೂರಿನಲ್ಲಿ ಹೋಮ್ ಆರ್ಟಿ-ಪಿಸಿಆರ್ ಟೆಸ್ಟ್ ಅನ್ನು ಬುಕ್ ಮಾಡಬಹುದು 7813811811 ಗೆ ಕರೆ ಮಾಡಿ